‘ಹಿಟ್ ವಿಕೆಟ್ ಇದೇ ತಿಂಗಳಲ್ಲಿ ಆರಂಭ
Posted date: 16 Thu, Apr 2015 – 08:52:22 AM

ಮೂರು ವರ್ಷಗಳ ಹಿಂದೆ ‘ಬಿಸಿಲೆ ಎನ್ನುವ ಚಿತ್ರವೊಂದು ಬಂದಿತ್ತು ನಿಮಗೆ ನೆನಪಿರಬಹುದು. ದಿಗಂತ್ ನಾಯಕನಾಗಿ ನಟಿಸಿದ್ದ ಚಿತ್ರವನ್ನು ಯುವ ನಿರ್ದೇಶಕ ಸಂದೀಪ್ ಗೌಡ ನಿರ್ದೇಶಿಸಿದ್ದರು. ಈಗ ಅದೇ ಸಂದೀಪ್ ಗೌಡ ಮತ್ತು ದಿಗಂತ್ ಕಾಂಬಿನೇಷನ್ ಮತ್ತೆ ಒಂದಾಗಿದೆ.
‘ಹಿಟ್ ವಿಕೆಟ್ ಎನ್ನುವುದು ಚಿತ್ರದ ಹೆಸರು. ಒಬ್ಬ ಕ್ರಿಕೆಟ್ ಆಟಗಾರನ ಖಾಸಗಿ ಜೀವನ ಹೇಗಿರುತ್ತದೆ ಎನ್ನುವುದು ಚಿತ್ರದ ತಿರುಳು. ಈ ಚಿತ್ರದ ವಿಶೇಷತೆಯೆಂದರೆ ಮೊಟ್ಟ ಮೊದಲ ಬಾರಿಗೆ ಒಂದೇ ಚಿತ್ರಕ್ಕೆ ಐದು ಜನ ಸಂಗೀತ ನಿರ್ದೇಶಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮಿಥುನ್, ಗಗನ್, ವಿವೇಕ್, ಜೂಡಾ ಮತ್ತು ಅಭಿಮನ್ ಈ ಚಿತ್ರದ ಸಂಗೀತ ನಿರ್ದೇಶಕರುಗಳು.
ಈ ಚಿತ್ರದಲ್ಲಿ ದಿಗಂತ್ ಜೊತೆಗೆ ಅಪೂರ್ವ ರೈ ಎಂಬ ಕನ್ನಡದ ಹುಡುಗಿ ನಟಿಸುತ್ತಿದ್ದಾಳೆ.  ಅಪೂರ್ವ ರೈ ಈಗಾಗಲೇ ತಮಿಳಿನಲ್ಲಿ ಅರ್ಜುನ್ ಸರ್ಜಾ ಅವರೊಂದಿಗೆ ನಟಿಸುತ್ತಿದ್ದು. ಕನ್ನಡದಲ್ಲಿ ‘ಹಿಟ್ ವಿಕೆಟ್ ಮೊದಲ ಚಿತ್ರವಾಗಿದೆ. ಇನ್ನು ಈ ಚಿತ್ರದ ಬಹುಮುಖ್ಯ ಪಾತ್ರವೊಂದರಲ್ಲಿ ಅನಂತ್ ನಾಗ್ ಕಾಣಿಸಿಕೊಳ್ಳುತ್ತಿದ್ದಾರೆ.
ಒಟ್ಟಾರೆ ‘ಹಿಟ್ ವಿಕೆಟ್ ಮುಹೂರ್ತಕ್ಕೆ ಅಣಿಯಾಗುತ್ತಿದ್ದು, ಇದೇ ತಿಂಗಳ ಕೊನೆಗೆ ಸೆಟ್ಟೇರಲಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed